Thursday, 8 March 2012

ಗುರು ಒಬ್ಬನೆ ಈ ಜಗದಲ್ಲಿ


ನೀನೊಬ್ಬ ಇಲ್ಲಿ, ನಿನ್ನಂತೆಯೇ ಇಲ್ಲಿ,
ಆಸೆ ನಿನಗೊಂದು ಇಲ್ಲಿ, ಆಸೆಗಳು ನೂರಾರು ಇಲ್ಲಿ.

ನಟನೆ ನಿನದೊಂದು, ನಾಟಕಗಳು ನೂರಾರು,
ಸಂತಸ ನಿನಗೊಂದು, ಸ್ವಾರ್ಥಿಗಳು ಸಾವಿರಾರು.

ಕಣ್ಣೀರು ಏತಕೆ ಗೆಳೆಯ, ಪನ್ನೀರೆಂದು ತಿಳಿದು ಬಾಳು,
ಕಷ್ಟ ನಿನಗಷ್ಟೆ ಇಲ್ಲಾ ಗೆಳೆಯ, ಕಷ್ಟದಲ್ಲೂ ನಗುವುದೇ ಬಾಳು.

ನಿರೀಕ್ಷೆಗಳನ್ನು ತಡೆಹಿಡಿ, ಬೇರೊಬ್ಬರ ನಿರೀಕ್ಷೆಯೇ ನೀನು,
ಅರ್ಥವಿಲ್ಲದ ಜಗವೆಂದರೆ, ಮತಿಹೀನನಾಗುವೆ ನೀನು.

ಗುರುಒಬ್ಬನೇ ನಿನ್ನಲ್ಲೀ, ಅವನೊಬ್ಬನೇ ಈ ಜಗದಲ್ಲಿ,
ಸಮಾಧಾನ ನಿನ್ನಲ್ಲೀ, ಗುರುವಿನಿಂದಲೇ ನಿನ್ನಲ್ಲಿ

Tuesday, 6 March 2012

ಗೊತ್ತು ನಂಗೆ ಗೊತ್ತು ನಿಂಗೆ

ಸೆಳೆತ  ಜಾಸ್ತಿ , ಸಂಬಂಧ  ಕಮ್ಮಿ,
ನೋವು ಜಾಸ್ತಿ , ನಲಿವು ಕಮ್ಮಿ.
ನೋಟ ಒಂದೇ, ದೇಹ ಬೇರೆ,
ದೇಶ ಒಂದೇ, ಭೇದ ಬೇರೆ.
ನಾವು ಸ್ವಲ್ಪ, ನೋವು ನೂರು,
ಕಾಯ ಅಲ್ಪ, ಕನಸು ನೂರು.
ಯಾಕೆ ಹಿಂಗೆ, ನಿಂಗೆ ನಂಗೆ,
ಗೊತ್ತು ನಿಂಗೆ, ಗೊತ್ತು ನಂಗೆ.