Thursday, 25 December 2014

ಹಸ್ತದಲ್ಲಿಲ್ಲಾ ಹಣೆಬರಹಾ

ಹಸ್ತದಲ್ಲಿಲ್ಲ ಹಣೆಬರಹ,
ಕಾರಣವಲ್ಲ ವಿಧಿಬರಹ.

ಮನದಿ ವಿಶ್ವಾಸ ನೆಲಸಲಿ ಸದಾ,
ಶ್ರಮ ನಿಷ್ಠೆ ಆಳಲಿ ನಿನ್ನನ್ನು ಸದಾ.

ಸುತ್ತಲೂ ಬರೀ ನಿರಾಸೆಯ ಜಾಲ,
ಆತ್ಮ ಬಲದಿ ಮುನ್ನುಗ್ಗು ಸದಾ ಕಾಲ.

ಅಳಿಯ ಬೇಡ ಸುಖ ಹಣದ ಹಾದಿಯಲಿ,
ಕಳೆಯ ಬೇಡ ಸುಖ ಅಂತಸ್ತಿನ ಹೊದಿಕೆಯಲಿ.
 
ದೂರ ದೃಷ್ಟಿಯೊಂದಿರಲಿ ಪ್ರತಿ ಕಾರ್ಯದಿ,
ಗೆಲುವು ನಿಂದೆ ಆಗ ಪ್ರತಿ ಸರದಿ.

Monday, 1 July 2013

ಓ ಉಸಿರೇ, ನಿನಗಿದು ಸರಿಯೇ ? ಓ ಉಸಿರೇ, ನಾ ನಿನ್ನ ಅರಿಯೆ.

ಓ ಉಸಿರೇ, ನಿನಗಿದು ಸರಿಯೇ ?
ಓ ಉಸಿರೇ, ನಾ ನಿನ್ನ ಅರಿಯೆ.

ಅಳುವಿನಿಂದ  ಸ್ವಾಗತ ನಿನ್ನದು,
ಹಸಿವಿನೊಂದಿಗೆ ಆಟ ನಿನ್ನದು.

ಆಸೆಯ ಜೊತೆ ಹೆಜ್ಜೆ ಹಾಕಿ,
ಕಷ್ಟದ ಜೊತೆ ನಿನ್ನ ಪೈಪೋಟಿ.

ಮೋಹದ ಮಾನವನಲ್ಲಿ ನೀನು,
ತೋರಿಸುವೆ ಮಸಣದ ಹಾದಿಯನ್ನು.

ದೇಹದ ದೇವರಾಗಿ ಬಂದು,
ಆ ಭಗವಂತನ ಅನುಭವ ನಿಂದು.

ಓ ಉಸಿರೇ, ನಿನಗಿದು ಸರಿಯೇ ?
ಓ ಉಸಿರೇ, ನಾ ನಿನ್ನ ಅರಿಯೆ.

Thursday, 8 March 2012

ಗುರು ಒಬ್ಬನೆ ಈ ಜಗದಲ್ಲಿ


ನೀನೊಬ್ಬ ಇಲ್ಲಿ, ನಿನ್ನಂತೆಯೇ ಇಲ್ಲಿ,
ಆಸೆ ನಿನಗೊಂದು ಇಲ್ಲಿ, ಆಸೆಗಳು ನೂರಾರು ಇಲ್ಲಿ.

ನಟನೆ ನಿನದೊಂದು, ನಾಟಕಗಳು ನೂರಾರು,
ಸಂತಸ ನಿನಗೊಂದು, ಸ್ವಾರ್ಥಿಗಳು ಸಾವಿರಾರು.

ಕಣ್ಣೀರು ಏತಕೆ ಗೆಳೆಯ, ಪನ್ನೀರೆಂದು ತಿಳಿದು ಬಾಳು,
ಕಷ್ಟ ನಿನಗಷ್ಟೆ ಇಲ್ಲಾ ಗೆಳೆಯ, ಕಷ್ಟದಲ್ಲೂ ನಗುವುದೇ ಬಾಳು.

ನಿರೀಕ್ಷೆಗಳನ್ನು ತಡೆಹಿಡಿ, ಬೇರೊಬ್ಬರ ನಿರೀಕ್ಷೆಯೇ ನೀನು,
ಅರ್ಥವಿಲ್ಲದ ಜಗವೆಂದರೆ, ಮತಿಹೀನನಾಗುವೆ ನೀನು.

ಗುರುಒಬ್ಬನೇ ನಿನ್ನಲ್ಲೀ, ಅವನೊಬ್ಬನೇ ಈ ಜಗದಲ್ಲಿ,
ಸಮಾಧಾನ ನಿನ್ನಲ್ಲೀ, ಗುರುವಿನಿಂದಲೇ ನಿನ್ನಲ್ಲಿ

Tuesday, 6 March 2012

ಗೊತ್ತು ನಂಗೆ ಗೊತ್ತು ನಿಂಗೆ

ಸೆಳೆತ  ಜಾಸ್ತಿ , ಸಂಬಂಧ  ಕಮ್ಮಿ,
ನೋವು ಜಾಸ್ತಿ , ನಲಿವು ಕಮ್ಮಿ.
ನೋಟ ಒಂದೇ, ದೇಹ ಬೇರೆ,
ದೇಶ ಒಂದೇ, ಭೇದ ಬೇರೆ.
ನಾವು ಸ್ವಲ್ಪ, ನೋವು ನೂರು,
ಕಾಯ ಅಲ್ಪ, ಕನಸು ನೂರು.
ಯಾಕೆ ಹಿಂಗೆ, ನಿಂಗೆ ನಂಗೆ,
ಗೊತ್ತು ನಿಂಗೆ, ಗೊತ್ತು ನಂಗೆ.